Sunday, May 2, 2010

ಸಿದ್ದು! ಈ ಸಾವು... ಆಘಾತಕಾರಿ!!!


ಮಿತ್ರ ಸಿದ್ದು ಅಗಲಿ ತಿಂಗಳು ಕಳೆಯುತ್ತಾ ಬಂತು. ಬದುಕಿನುದ್ದಕ್ಕು ಸದಾ ಹಸನ್ಮುಖಿಯಾಗಿ, ಗೆಳೆಯರ ಒಡನಾಟದಲ್ಲಿ ಒಂದು ಮಿಂಚಿನ ಸಂಚಾರವಾಗಿದ್ದ ಸಿದ್ದು ಬಾರದ ಲೋಕಕ್ಕೆ ತಿರುಗಿ ಹೊಗಿದ್ದು ನಿಜಕ್ಕು ಭರಿಸಲಾಗದ ದುಃಖ ನಿಡಿದೆ. ನನ್ನ ಮತ್ತು ಸಿದ್ದು ಪರಿಚಯ ಭಾಗ್ಯನಗರದ ಹೈಸ್ಕೂಲ್ ನಿಂದ ಪ್ರಾರಂಭವಾಗಿದ್ದು. ನಿತ್ಯ ಅವನ ಸೈಕಲ್ ನಲ್ಲಿ ನಾನು ಸ್ಕೂಲ್ ಗೆ ಹೋಗುತ್ತಿದ್ದೆ. ತುಂಬಾ ಆತ್ಮೀಯತೆಯಿಂದ ನನ್ನನ್ನು ತನ್ನೆಡೆಗೆ ಸೆಳೆದುಕೊಂಡಿದ್ದ ಸಿದ್ದು. ತುಂಬಾ ಬೇಗನೆ ಇಬ್ಬರ ಮಧ್ಯ ಸಲುಗೆ ಬೆಲೆದು ಹೋಗಿತ್ತು. ಅವನು ಅದೆಷ್ಟು ಬೇಗ ಜಗಳಕ್ಕೆ ಮೈ ಮೇಲೆ ಏರಿ ಹೋಗುತ್ತಿದ್ದನೋ, ಅಷ್ಟೇ ಬೇಗ ಗೆಳೆತನದ ತೆಕ್ಕೆಗೆ ಸೆಳೆದುಕೊಳ್ಳುವ ಮಾಂತ್ರಿಕತೆ ಅವನಲ್ಲಿತ್ತು. ಸಿದ್ದು ನನಗೆ ತೀರಾ ಆಪ್ತ ಎಂದೇನು ಅಲ್ಲ. ಆದರೆ ಖಂಡಿತ ನನಗೆ ಪ್ರೀತಿಯ ಗೆಳೆಯನಾಗಿದ್ದಾ. ಅವನ ಸಾವಿನ ಖಾಲಿತನ ನಿರಂತರ..."ಸಿದ್ದಾ ಇಲ್ಲೆ ಹ್ಯಾಂಗ ಬಿಂದಾಸ್ ಆಗಿದ್ದಿ, ಅಲ್ಲಿಯು ನಿನ್ನ ಆತ್ಮ ಫುಲ್ ಖುಷ್ ಆಗಿರಲಿ. ನಿನ್ನ ಜಾತ್ರೆ ಮುಗಿತಲೆ ಮಗನ...."

Saturday, May 1, 2010

ಕನಸುಗಳ ಬೆನ್ನು ಹತ್ತಿ....

ಬದುಕಿನ ಪ್ರಾರಂಭ ಕಣ್ಣು ತೆರೆಯುವದರೊಂದಿಗೆ ಆದರೆ ಕನಸು ಕಾಣುವ ಅಭಿಯಾನ ಅಲ್ಲಿಂದಲೇ ಆರಂಭ. ನನಗೆ ಈಗಲು ಈ ಕನಸಿನ ಬಗ್ಗೆ ನೂರೆಂಟು ಕೌತುಕಗಳಿವೆ. ಅದು ಚಿಗುರೊಡೆಯುವ ಬಗೆ, ರೂಪ ಪಡೆಯುವ ಬಗೆ, ಒಂದು ಸೂಪರ್ ಸಿನಿಮಾದ ಸ್ಕ್ರಿನ್ ಪ್ಲೇ ತರಹ ನರೇಟ್ ಆಗುವ ಬಗೆ ಮತ್ತು ಪ್ರತಿ ಸಾರಿಯು ಬಾಲಿವುಡ್ ಗೆ ಬರುವ ಯುವ ನಿದೇ೵ಶಕರು ಕ್ರಿಯೇಟಿವ್ ಹೆಸರಲ್ಲಿ ವಿಚಿತ್ರ ಸಿನಿಮಾ ಮಾಡಿ ಗೊಂದಲಮಯವಾಗಿ ತೆರೆ ಎಳೆಯುವ ರೀತಿಯಲ್ಲಿ abrupt ಆಗಿ climax ಕಂಡುಬರುತ್ತದೆ. ಮಾಯಾಮೃಗವೆನ್ನಿ, ಬಿಸುಲುಗುದರೆ ಎನ್ನಿ ಕನಸು ಮಾತ್ರ ಒಂದು ವಿಭಿನ್ನ ಲೋಕಕ್ಕೆ ಸರ್ರನೆ ಎಳೆದೊಯ್ಯುವ ಮಾಂತ್ರಿಕ ಎಂದಷ್ಟೆ ಹೇಳಬಹುದು.




ಎಷ್ಟೋ ಸಾರಿ ಕಾಡುವ ಕನಸುಗಳು ಕೆಲವೊಮ್ಮೆ ವಾಕರಿಕೆ ತರಿಸಿದ್ದು ಉಂಟು. ಹಳೆಯ ಗೆಳಯ/ತಿ ಬಂದು ಬೆಚ್ಚಗಿನ ಅನುಭವ ನೀಡಿದ್ದು, ಯಾವುದೋ ಕಾಣದ ಸ್ಥಳಕ್ಕೆ ಕಾಲಿರಿಸಿದ್ದು, ವಾಸ್ತವದಲ್ಲಿ ಆಗದ್ದು, ಸಾಧಿಸಿ ತೋರಿಸಿದ್ದು ಅಬ್ಬಾ! ಒಂದೇ, ಎರಡೆ ಆದರೆ ಇದಕ್ಕೆ ಉತ್ತರ ಮಾತ್ರ ಅಗೋಚರ. ಹುಡುಕುವ ಯತ್ನ ಜಾರಿ...ಕನಸಿನ ಬಗ್ಗೆ ಯಾರ್ಯಾರು ಏನು ಹೇಳಿದ್ದಾರೋ ನನಗೆ ತಿಳಿದಿಲ್ಲ. ಆದರೆ ನೀವು ಏನು ಹೇಳುತ್ತೀರಿ ಅಂತ ಕಾಯ್ತಾ ಇದ್ದೀನಿ. ಆದರೆ ಕನಸಲ್ಲಿ ಬಂದು ಕಾಡಬೇಡಿ.