Tuesday, June 22, 2010

ಬದುಕು ಹಾಗೆ ಮಗ್ಗಲು ಬದಲಿಸಲೆ ಬೇಕು! ಅಲ್ವಾ...

ಅವತ್ತು ನಾನು ಏನಾಗಿದ್ದೆ, ಇವತ್ತು ಎಲ್ಲಿದ್ದೀನಿ ಎಂಬ ಪ್ರಶ್ನೆ ಪ್ರತಿಯೊಬ್ಬರನ್ನು ಒಂದಲ್ಲಾ ಒಂದು ಸಾರಿ ಕಾಡದೆ ಇರದು.ನನ್ನದು ಅದೆ ಕತೆ.ಏನೆನೋ ಆಗಿ ಈಗ ಏನಾಗಿದೆ ಎಂದು ನನ್ನನ್ನು ನಾನು ಅದೆಷ್ಟು ಸಾರಿ ಕೇಳಿಕೊಂಡಿದ್ದೇನೋ ನನಗೆ ಗೊತ್ತಿಲ್ಲ. ಎಷ್ಟೋ ಸಾರಿ ನಾನವತ್ತು ವಿನಾಶದ ಅಂಚಿಗೆ ಹೋಗಿ ನಿಂತಿದ್ದೇನಾ? ಖಂಡಿತಾ ನನಗೆ ಗೊತ್ತಿಲ್ಲ.ಆದರೆ ಈಗಿನಂತೆ ಬದುಕು ಸ್ಪಷ್ಟವಾಗಿ ಹೆಜ್ಜೆ ಹಾಕುತ್ತಿರಲಿಲ್ಲ. ನನ್ನ ವ್ಯಕ್ತಿತ್ವ ತೀರಾ ಮಸುಕಾಗಿತ್ತು. ನನಗೆ ತಿಳಿಯದೆ ನಾನು ತಪ್ಪು ದಾರಿ ಹಿಡಿದಿದ್ದೆ ಎಂಬುದು ಸರಿಯೋ ತಪ್ಪೋ ಗೊತ್ತಿಲ್ಲ.ಆದರೆ ಆ ಕೆಲವು ವಷ೵ಗಳನ್ನು ನಾನು ಅದೆಷ್ಟು ವ್ಯಥ೵ವಾಗಿ ಕಳೆದೆನಲ್ಲ ಎಂಬ ಕೊರಗು ಇಗಲೂ ನನ್ನನ್ನು ಕೆಲವೊಮ್ಮೆ ಕಾಡಿದ್ದಿದ್ದೆ. ಯಾವ ಗುರಿ ಇರಲಿಲ್ಲ. ಬದುಕಿಗೆ ಒಂದು ನಿಜವಾದ ಅಥ೵ ಕಂಡು ಕೊಳ್ಳುವುದರಲ್ಲಿ ನಾನು ಸಂಪೂಣ೵ ವಿಫಲನಾಗಿದ್ದೆ ಎಂದೆ ಹೇಳಬಹುದು. ಹಾಗೆ ಬದುಕು ಮಗ್ಗಲು ಬದಲಿಸದಿದ್ದರೆ ನಾನು ಈಗಿನ ನಾನಾಗಿರತಿರಲಿಲ್ಲ ಎಂಬುದು ಸಿದ್ಧ. ಖಂಡಿತಾ ಒಂದು ಸಣ್ಣ ಆದರೆ ಗಟ್ಟಿಯಾದ ನಿಧಾ೵ರ ನನ್ನ ಇಡೀ ಬದುಕಿನ ದಿಕ್ಕನ್ನೆ ಬದಲಿಸಿ ಹಾಕಿತು ಎಂದರೆ ಈ ಗಲೂ ನನಗೆ ನಂಬಲು ಆಶ್ಚಯ೵ ಏನಿಸುತ್ತದೆ.ನಾನೀಗ ಅಬ್ಬಬ್ಬಾ ಏನ್ನುವಂತಹ ಸಾಧನೆ ಮಾಡಿದ್ದಿನಿ ಎಂದು ಇದನ್ನೆಲ್ಲಾ ಬರೆದು ಕೊಳ್ಳುತ್ತಿಲ್ಲ. ತಿರಾ ವಿಫಲತೆಯೆ ಮೈದುಂಬಿ ಹೋಗಿದ್ದ ನಾನು ಅದನ್ನೆಲ್ಲಾ ಕೊಡವಿ ಕೊಂಡು ಎದ್ದು ಬಂದೆನಲ್ಲಾ ಎಂಬುದೆ ನನ್ನ ಬಗ್ಗೆ ಒಂದಿಷ್ಟು ವಿಶ್ವಾಸ ಮೂಡಿಸುತ್ತದೆ. ಬದುಕೆ ಹಾಗೆ ಏನೋ ಆಯಿತು ಎಂದು ಹತಾಶರಾಗಿದ್ದಾಗ, ನಿಲಿ೵ಪ್ತವಾಗಿದ್ದಾಗ ನಮಗೆ ತಿಳಿಯದಂತೆ ಯಶಸ್ಸಿನ ಸಣ್ಣ ಕಿಟಕಿ ಅದೆಲ್ಲೊ ತೆರೆದು ಕೊಂಡಿರುತ್ತದೆ. ಅದನ್ನು ಗಮನಿಸುವ ಜಾಣ್ಮೆ ಮತ್ತು ತಾಳ್ಮೆ ಬೇಕು ಅಷ್ಟೆ!